Adarsh PU College. Best PU College in South Bangalore

NSS 2023

ವಿಶ್ವಪರಿಸರ ದಿನಾಚರಣೆ

ದಿನಾಂಕ 5-6-2023 ರಂದು ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ ಮಹತ್ವವನ್ನು ಕುರಿತು ಭಾಷಣವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಕುಮಾರಿ ದೀಕ್ಷಿತ, ಕುಮಾರಿ ಪೂಜಿತ ಮತ್ತು ಕುಮಾರ ಆರ್ಯನ್ ಪರಿಸರದ ಮಹತ್ವ ನಮ್ಮೆಲ್ಲರ ಜವಾಬ್ದಾರಿ ಎಂದು ಕುರಿತು ಮಾತನಾಡಿದರು ಎಲ್ಲಾ ಉಪನ್ಯಾಸಕರು ಭಾಗವಹಿಸಿದ್ದರು. ಕಾರ್ಯಕ್ರಮಾಧಿಕಾರಿ  ಡಾ. ಕೆ. ಮಲ್ಲಿಕಾರ್ಜುನ ಪರಿಸರ ದಿನಾಚರಣೆ ಜಾಗೃತಿಯ ಕುರಿತು ಮಾತನಾಡಿದರು.

ಎನ್.ಎಸ್.ಎಸ್ ಘಟಕದ ಉದ್ಘಾಟನಾ ಕಾರ್ಯಕ್ರಮ

ದಿನಾಂಕ 4-9-23 ರಂದು ಎನ್ಎಸ್ಎಸ್ ಘಟಕದ ಉದ್ಘಾಟನಾ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಸ್ವಚ್ಛತೆಯ ಜೊತೆಗೆ ನೀರಿನ ಉಳಿತಾಯ ಮತ್ತು ಮಿತ ಬಳಕೆಯ ಮಹತ್ವವನ್ನು ಅರಿತು ಜಾಗೃತಿ ಮೂಡಿಸುವಂತೆ ಆಗಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಪದಮ್ ರಾಜ್ ಮೆಹ್ತಾ ಪ್ರಾಂಶುಪಾಲರಾದ ಡಾ. ಎಸ್ ಪ್ರಶಾಂತ್ ಕಾರ್ಯಕ್ರಮಾಧಿಕಾರಿ ಡಾ. ಕೆ.ಮಲ್ಲಿಕಾರ್ಜುನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು ಬೆಳಗ್ಗೆ 11 ಗಂಟೆಯಿಂದ 12 ಗಂಟೆವರೆಗೆ ಕಾರ್ಯಕ್ರಮ ನಡೆಯಿತು.

ಸ್ವಚ್ಛಹಿ ಸೇವಾ

ದಿನಾಂಕ 30-09-23 ರಂದು ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಯೋಗದಲ್ಲಿ ಎನ್. ಎಸ್. ಎಸ್ ಘಟಕವು ಸ್ವಚ್ಛಹಿ ಸೇವಾ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳು  ಡಾ. ಎ. ಎಸ್. ಶಂಕರ್ ನಾರಾಯಣ, ತನುಜಾ ರಾವ್ ಮತ್ತು ಶಿವಶಂಕರ್ ಭಾಗವಹಿಸಿದ್ದರು

ಆದರ್ಶ ಸಂಸ್ಥೆಗಳ ಗೌರವ ಕಾರ್ಯದರ್ಶಿಗಳಾದ ಜಿತೇಂದ್ರ ಮರ್ಡಿಯಾ ಮತ್ತು  ಪ್ರಾಂಶುಪಾಲರಾದ ಡಾ. ಎಸ್ ಪ್ರಶಾಂತ, ವಿದ್ಯಾರ್ಥಿಗಳು, ಪದವಿ ವಿಭಾಗದ ಎನ್. ಎಸ್. ಎಸ್ ಅಧಿಕಾರಿ ಶ್ರೀಮತಿ ಭಾವನಾ ಭಾಗವಹಿಸಿದ್ದರು. ನಂತರ ಗಾಂಧಿ ಜಯಂತಿ ಪ್ರಯುಕ್ತ ಕಾಲೇಜಿನ ಆಟದ ಮೈದಾನದಲ್ಲಿ ಶ್ರಮದಾನವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರಮದಾನ ಕಾರ್ಯಕ್ರಮ

ದಿನಾಂಕ 9-12-2023 ರಂದು ಶ್ರೀ ರಾಮಕೃಷ್ಣ ಆಶ್ರಮ ಬಸವನಗುಡಿ ಇಲ್ಲಿಗೆ ನಮ್ಮ 50 ಎನ್. ಎಸ್.ಎಸ್ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಗಿತ್ತು. ಮೊದಲ ಒಂದು ಗಂಟೆ ಆಶ್ರಮದ ಬಗ್ಗೆ ಪರಿಸರ, ಆಶ್ರಮದ ಉದ್ದೇಶ ಕಾರ್ಯಾಚರಣೆ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಲಾಯಿತು ನಂತರ ವಾರ್ಡನ್ ಸ್ವಾಮೀಜಿಯವರಾದ ಪರಮಪೂಜ್ಯ ತದ್ಯುಕ್ತಾನಂದಜಿ  ಮಹಾರಾಜ್ ಅವರು ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ ಶಿಕ್ಷಣದ ಮಹತ್ವ ಸೇವೆ ಮತ್ತು ನೈತಿಕ ಮೌಲ್ಯಗಳ ಬಗ್ಗೆ ವಿವರಿಸಿದರು ನಂತರ ಮೂರು ಗಂಟೆಗಳ ಕಾಲ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶಮದಾನ ಮುಗಿದ ಮೇಲೆ ಪ್ರಸಾದವನ್ನು ಸ್ವೀಕರಿಸಿ ಅಲ್ಲಿಂದ ಮಧ್ಯಾಹ್ನ 2:30 ಗಂಟೆಗೆ ತೆರಳಲಾಯಿತು. ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀನಿವಾಸ್ ಕೆ ಮತ್ತು ಇತಿಹಾಸ ಸಹ ಪ್ರಾಧ್ಯಾಪಕರಾದ ಡಾ. ಮಂಜುಳಾ ವಿ.ಕೆ. ಹಾಗೂ ಕಾರ್ಯಕ್ರಮಾಧಿಕಾರಿ ಡಾ. ಕೆ.ಮಲ್ಲಿಕಾರ್ಜುನ ಭಾಗವಹಿಸಿ, ನಿರ್ವಹಿಸಿದರು.

ಸ್ವಾಮಿ ವಿವೇಕಾನಂದರ ಜಯಂತಿ

ದಿನಾಂಕ 12-1-2024 ರಂದು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರ ಉದ್ದೇಶಗಳನ್ನು ಮತ್ತು ಸಂದೇಶಗಳನ್ನು ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು