

ನವೆಂಬರ್ 16, 2024 ರಂದು, ಎಸ್.ಆರ್.ಎನ್. ಆದರ್ಶ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವು ಅತ್ಯಂತ ಭವ್ಯವಾಗಿ ಆಚರಿಸಲಾಯಿತು. ನಾಡಿನ ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಗಳ ಸೊಗಡನ್ನು ಪ್ರದರ್ಶಿಸಿದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಮತ್ತು ಅತಿಥಿಗಳು ಉತ್ಸಾಹದಿಂದ ಭಾಗವಹಿಸಿದರು. ಕನ್ನಡದ ಅಮೃತವನ್ನು ಸವಿದ ಈ ದಿನ ನಮ್ಮೆಲ್ಲರ ಹೃದಯದಲ್ಲಿ ಅಚ್ಚಳಿಯದ ಸುವರ್ಣ ಕ್ಷಣಗಳ ನೆನಪಾಗಿ ಉಳಿಯಲಿದೆ.



